ಇ-ಆಡಳಿತ ಕೇಂದ್ರವು ಕರ್ನಾಟಕ ಸೊಸೈಟಿಗಳ (ಸಂಘಗಳ) ನೋಂದಣಿ ಕಾಯ್ದೆ 1960 ರ ಅಡಿಯಲ್ಲಿ ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ವತಿಯಿಂದ 2006 ರಲ್ಲಿ ಸ್ಥಾಪನೆಯಾದ ಒಂದು ಸೊಸೈಟಿಯಾಗಿದೆ. ಇ-ಆಡಳಿತ ಕೇಂದ್ರವು ಒಂದು ಸ್ವಾಯತ್ತ ಹಾಗೂ ಸ್ವತಂತ್ರ ಸಂಸ್ಥೆಯಾಗಿದ್ದು, ಕರ್ನಾಟಕದಲ್ಲಿ ವಿವಿಧ ಇ-ಆಡಳಿತ ಉಪಕ್ರಮಗಳನ್ನುರೂಪಿಸಿ, ಜಾರಿಗೊಳಿಸಿ ನಿರ್ವಹಿಸುತ್ತದೆ..
ಇ-ಆಡಳಿತದ ಉಪಕ್ರಮಗಳಲ್ಲಿ “ಇ-ಕನ್ನಡ ಯೋಜನೆ” ಯೂ ಒಂದಾಗಿದೆ. ಈ ಯೋಜನೆಯು ಕನ್ನಡ ಭಾಷೆಯ ಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ವೇದಿಕೆಯಾಗಲಿದೆ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ.
“ಇ-ಕನ್ನಡ ಕಲಿಕಾ ಪೋರ್ಟಲ್” : ಈ ಆನ್ಲೈನ್ ವೇದಿಕೆಯ ಮೂಲಕ ಕನ್ನಡ ಭಾಷೆಯ ಜ್ಞಾನವನ್ನು ಹೆಚ್ಚಿಸುವುದು ಮತ್ತು ಕನ್ನಡ ಭಾಷೆಯನ್ನು ಕಲಿಸುವ ಕನ್ನಡ ಭಾಷೆಯ ಮೂಲಕ ಭೌತ ವಿಜ್ಞಾನ ,ರಸಾಯನ ವಿಜ್ಞಾನ ,ವೈದ್ಯಕೀಯ ,ವಾಣಿಜ್ಯ – ವ್ಯವಹಾರ ,ಮಾಹಿತಿ ತಂತ್ರಜ್ಞಾನಗಳನ್ನು ಕಲಿಸುವುದು ನಮ್ಮ ಉದ್ದೇಶವಾಗಿದೆ.,
“ ಪದಕಣಜ “ ದಲ್ಲಿ ಕನ್ನಡ ಭಾಷೆಗೆ ಸಂಬಂಧಿಸಿದ, ಈಗಾಗಲೇ ಪ್ರಕಟಿತ ನಿಘಂಟು/ಪದಕೋಶಗಳನ್ನು ಒಂದೇ ಡಿಜಿಟಲ್ ವೇದಿಕೆ ಮೂಲಕ ಸಾರ್ವಜನಿಕರಿಗೆ ದೊರೆಯುವಂತೆ ಮಾಡುವ ಉದ್ದೇಶ ಹೊಂದಲಾಗಿದೆ.
ತಂತ್ರಜ್ಞಾನ ಮಾನದಂಡಗಳು: ಕನ್ನಡ ಭಾಷೆಗೆ ಸಂಬಂಧಿಸಿದ ತಂತ್ರಜ್ಞಾನಕ್ಕೆ ಮಾನದಂಡಗಳ ರೂಪುರೇಷೆ ಸಿದ್ದಪಡಿಸಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
“ಡಿಜಿಟಲ್ ಜಗಲಿ”: ಅರ್ಥಪೂರ್ಣ ಕನ್ನಡ ತಂತ್ರಜ್ಞಾನದ ಚರ್ಚೆಗೆ ಡಿಜಿಟಲ್ ಜಗಲಿ ವೇದಿಕೆಯನ್ನು ಆರಂಭಿಸಿ ಸಮುದಾಯದ ಸಲಹೆ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ವೇದಿಕೆ ರೂಪಿಸಲಾಗಿದ್ದು ಇದರಿಂದ ಸಮುದಾಯದ ಭಾಗಿತ್ವವು ಹೆಚ್ಚಾಗಲಿದೆ ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಇ - ಕನ್ನಡ ಅಂತರಜಾಲ ತಾಣವನ್ನು ತಾವೆಲ್ಲರೂ ಬಳಸಿ, ಯೋಗ್ಯವಾದ ಸಲಹೆ ಸೂಚನೆಗಳನ್ನು ಕೊಟ್ಟು ಕನ್ನಡ ಜ್ಞಾನ - ತಂತ್ರಜ್ಞಾನದ ಕೆಲಸ ಕಾರ್ಯಗಳಿಗೆ ಕೈಜೋಡಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ.