ಕಡ್ಡಾಯ ಅಂಶಗಳು
 • ಯುನಿಕೋಡ್ ಮಾನದಂಡಗಳನ್ನು ಕಡ್ಡಾಯವಾಗಿ ಅನುಸರಿಸಬೇಕು.
 • ರೆಂಡರಿಂಗ್‌ ಸಮಸ್ಯೆಗಳನ್ನು ನಿವಾರಿಸಬೇಕು.
ಕಡ್ಡಾಯ ಅಂಶಗಳು ಅಪೇಕ್ಷಣೀಯ ಅಂಶಗಳು
 • ಎಲ್ಲ ಮೆನ್ಯು ಮತ್ತು ಜಿಯುಐ ಪದಗಳನ್ನು ಕಡ್ಡಾಯವಾಗಿ ಯುನಿಕೋಡ್‌ ಕನ್ನಡದಲ್ಲಿ ದೇಸೀಕರಣ ಸಮಿತಿಯ ಮಾನದಂಡ ಪದಗಳಂತೆಯೇ ಬಳಸಬೇಕು.
 • ಹೊಸ ಪದಗಳಿದ್ದರೆ ಅದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ದೇಸೀಕರಣ ಸಮಿತಿಯ ಗಮನಕ್ಕೆ ತಂದು ಕನ್ನಡ ಪದ ಬಳಸಬೇಕು
 • Internationalization_and_localization ಇಲ್ಲಿರುವ ಸೂತ್ರಗಳನ್ನು ಅನುಸರಿಸಬೇಕು. ಇದನ್ನು ಅಳವಡಿಸಿರುವ ಬಗ್ಗೆ ತಂತ್ರಾಂಶ ತಯಾರಕರು ಸ್ವ ಪ್ರಮಾಣಪತ್ರ ನೀಡಬೇಕು. ಮುಂದಿನ ಹಂತದಲ್ಲಿ ಈ ಬಗ್ಗೆ ತಂತ್ರಾಂಶ ಬಳಸಿ ದೃಢೀಕರಣ (ಪರಿಶೋಧನೆ) ಮಾಡಬಹುದು.
ಕಡ್ಡಾಯ ಅಂಶಗಳು
 • ಯುನಿಕೋಡ್‌ ಮಾನದಂಡಗಳನ್ನು ಕಡ್ಡಾಯವಾಗಿ ಅನುಸರಿಸಬೇಕು.
 • Open Type Features in TTF and OTF fonts ಮಾನದಂಡಕ್ಕೆ ಅನುಗುಣವಾಗಿರಬೇಕು. ವಿಂಡೋಸ್‌, ಲಿನಕ್ಸ್, ಆಪಲ್, ಆಂಡ್ರೋಯಿಡ್, ಮತ್ತು ಇತರೆ ವೇದಿಕೆಗಳಲ್ಲಿ ಮತ್ತು ಕಾರ್ಯಾಚರಣ ವ್ಯವಸ್ಥೆಗಳಲ್ಲಿ ಸರಿಯಾಗಿ ಕೆಲಸ ಮಾಡಬೇಕು.
 • ನಾರ್ಮಲ್, ಬೋಲ್ಡ್, ಇಟ್ಯಾಲಿಕ್‌, ಬೋಲ್ಡ್ ಇಟ್ಯಾಲಿಕ್‌ ಥಿನ್, ರೆಗ್ಯುಲರ್, ಮೀಡಿಯಂ, ಬೋಲ್ಡ್, ಎಕ್ಸ್ಟ್ರಾ ಬೋಲ್ಡ್. ಅಕ್ಷರಭಾಗಗಳ ರೆಂಡರಿಂಗ್‌ : ಇವು ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕು. ಖಾಸಗಿ ತಂತ್ರಾಂಶ ತಯಾರಕರನ್ನು ಕರೆದು ಪರಿಹಾರ ಹುಡುಕಬೇಕು.
 • ಕೆಲವು ನಿರ್ದಿಷ್ಟ ಸಂಕೀರ್ಣ ಅಕ್ಷರಭಾಗಗಳನ್ನು ಪ್ರತ್ಯೇಕವಾಗಿ ರೂಪಿಸಿ ಯುನಿಕೋಡ್‌ನಲ್ಲಿ ಅಳವಡಿಸಬೇಕು.
 • ಮುಕ್ತ ಪಿಡಿಎಫ್ ಪರಿವರ್ತಕ ತಂತ್ರಾಂಶವನ್ನು ಅಳವಡಿಸಬೇಕು ಲಿಬ್ರೆ ಆಫೀಸ್‌ನಂತಹ ಮುಕ್ತ ತಂತ್ರಾಂಶವನ್ನು ಅಧಿಕೃತವಾಗಿ ಬಳಸಿ ಪಿಡಿಎಫ್ ಮುಕ್ತ ಪರಿವರ್ತನೆ ಮಾಡುವುದಕ್ಕೆ ಉತ್ತೇಜನ ನೀಡಬೇಕು.
 • ವೆಬ್ ಫಾಂಟ್‌ಗಳ ಮಾನದಂಡ: https://www.w3.org/TR/css-fonts-4/
 • https://www.w3schools.com/css/css3_fonts.asp
ಕಡ್ಡಾಯ ಅಂಶಗಳು ಅಪೇಕ್ಷಣೀಯ ಅಂಶಗಳು
 • ಸರ್ಕಾರಿ ದಾಖಲೆಗಳನ್ನು ಕಡ್ಡಾಯವಾಗಿ ಡಿಜಿಟಲ್ ಸಹಿ ಅಳವಡಿಸಬೇಕು ಮತ್ತು ನಿರ್ದಿಷ್ಟ ಫಾಂಟ್‌ನಲ್ಲಿಯೇ ರೂಪಿಸಬೇಕು (ಅಕ್ಷರಭಾಗಗಳು ಸರಿಯಾಗಿ ಇರುವ ಫಾಂಟನ್ನು ಸೂಕ್ತವಾಗಿ ಚಿಕ್ಕ ಸಮಿತಿಯೊಂದರ ಮೂಲಕ ನಿರ್ಧರಿಸಬೇಕು)
 • ಡಿಜಿಟಲ್ ಸಹಿಯ ಕೆಳಗೆ ಕನ್ನಡದಲ್ಲಿ ಸಹಿ ಹಾಕಿದವರ ಸಂಪೂರ್ಣ ಹೆಸರು ಇರಬೇಕು.
 • ಕನಿಷ್ಠ 600 ಅಥವಾ 300 ಡಿಪಿಐ ಗುಣಮಟ್ಟದಲ್ಲಿ ಸ್ಕ್ಯಾನ್‌ ಮಾಡಬೇಕು. ಇವನ್ನೆಲ್ಲ ಓಸಿಆರ್ ಮಾಡಬೇಕು.
 • ಭದ್ರತಾ ಆಯ್ಕೆಗಳೊಂದಿಗೆ ಎಲ್ಲ ಸಾಫ್ಟ್‌ ಪ್ರತಿಗಳನ್ನೂ ನೇರವಾಗಿ ಪಿಡಿಎಫ್ ಮಾಡಬೇಕೇ ವಿನಃ ಸ್ಕ್ಯಾನ್‌ ಮಾಡುವುದನ್ನು ತಪ್ಪಿಸಬೇಕು. ಇದರಿಂದ ಗೂಗಲ್‌ನಲ್ಲಿ ಪಿಡಿಎಫ್ ಕಡತಗಳ ಒಳಗೂ ಪಠ್ಯದ ಹುಡುಕಾಟ ಸಾಧ್ಯವಾಗುತ್ತದೆ.
 • ಡಿಎಸ್ಇಆರ್ಟಿ ಪಠ್ಯಪುಸ್ತಕಗಳನ್ನು ಅಂಕೀಕರಣ ಮಾಡಲು ನೆರವು ನೀಡುವ ಮೂಲಕ ಟೆಸೆರಾಕ್ಟ್ನ್ನೂ ಸುಧಾರಿಸಬಹುದು.
ಕಡ್ಡಾಯ ಅಂಶಗಳು ಅಪೇಕ್ಷಣೀಯ ಅಂಶಗಳು
 • ಕನ್ನಡ ಭಾಷೆಯನ್ನು ಸರಿಯಾಗಿ ರೆಂಡರ್‌ ಮಾಡುವಂತಹ ಇ -ಬುಕ್‌ಗಳನ್ನು ರೂಪಿಸಬೇಕು.
 • Epub ನಮೂನೆಯನ್ನು ಮಾದರಿ ನಮೂನೆ ಎಂದು ಪರಿಗಣಿಸಬೇಕು.
 • ಕನ್ನಡದ ಪಠ್ಯದಿಂದ ಧ್ವನಿಗೆ ಸವಲತ್ತಿಗೆ ಅನುವು ಮಾಡಿಕೊಡಬೇಕು.
ಕಡ್ಡಾಯ ಅಂಶಗಳು ಅಪೇಕ್ಷಣೀಯ ಅಂಶಗಳು
 • ಶೇಕಡಾ 90 ರಷ್ಟು ನಿಖರತೆ ಇರಬೇಕು.
 • ಭಾರತೀಯ ಭಾಷಾ ಸಂಸ್ಥಾನದ ದತ್ತ ಸಂಚಯವನ್ನು
 • ಬಳಸಿಕೊಳ್ಳುವುದು.
 • ಪ್ರಿ ಮತ್ತು ಪೋಸ್ಟ್ ಪ್ರಾಸೆಸಿಂಗ್ ಅಲ್ಗಾರಿದಮ್ ಮಾಡಬೇಕು.
 • ಅಲ್ಪಾವಧಿ: ಗೂಗಲ್ ಅನುವಾದ ಅಭಿವೃದ್ಧಿಗೆ ಬೆಂಬಲ ನೀಡುವುದು.
 • ದೀರ್ಘಾವಧಿ: ಯಂತ್ರಾನುವಾದಕ್ಕೆ ಹೆಚ್ಚಿನ ನಿಧಿ ನೀಡಿ ಅಭಿವೃದ್ಧಿ ಮಾಡುವುದು.
ಕಡ್ಡಾಯ ಅಂಶಗಳು
 • ಕನ್ನಡ - ಹಿಂದಿಗೆ ಆದ್ಯತೆ ನೀಡಬೇಕು
 • ಭಾರತೀಯ ಭಾಷಾ ಸಂಸ್ಥಾನದ ದತ್ತ ಸಂಚಯವನ್ನು ಬಳಸಿಕೊಳ್ಳುವುದು
ಕಡ್ಡಾಯ ಅಂಶಗಳು ಅಪೇಕ್ಷಣೀಯ ಅಂಶಗಳು
 • ಕನಿಷ್ಠ 600 ಅಥವಾ 300 ಡಿಪಿಐ ಗುಣಮಟ್ಟದಲ್ಲಿ ಸ್ಕ್ಯಾನ್‌ ಮಾಡಬೇಕು. ಇವನ್ನೆಲ್ಲ ಓಸಿಆರ್ ಮಾಡಬೇಕು.
 • ಇದಕ್ಕಾಗಿ ಟೆಸೆರಾಕ್ಟ್ 4.0 ತಂತ್ರಾಂಶಕ್ಕೆ ಟೈಪ್ರೈಟಿಂಗ್ ಫಾಂಟ್‌ಗಳನ್ನು ಸೇರಿದಂತೆ ಇನ್ನೂ ಹೆಚ್ಚಿನ ಪ್ರಮಾಣಧಲ್ಲಿ ಫಾಂಟ್‌ಗಳನ್ನು ಊಡಿಸಬೇಕು.
 • ಎಲ್ಲಾ ಕನ್ನಡ ಪಠ್ಯಪುಸ್ತಕಗಳು, ರೆಫೆರೆನ್ಸ್‌ ಪುಸ್ತಕಗಳು ಎಲ್ಲವನ್ನೂ ಯುನಿಕೋಡ್‌ಗೆ ಪರಿವರ್ತಿಸಿ ಜಾಲತಾಣಗಳಲ್ಲಿ ಪ್ರಕಟಿಸಬೇಕು.
 • ಕನ್ನಡ ಪುಸ್ತಕ ಪ್ರಾಧಿಕಾರದ ಡಿಜಿಟಲೀಕರಣ : ಕಣಜದ ಜೊತೆಗೆ ಸಮನ್ವಯ ಮಾಡಬೇಕು
 • ಮುದ್ರಿತ ಪಠ್ಯದಿಂದ ಹಿಡಿದು ಕೈಬರಹ, ಫಲಕಗಳನ್ನು ಓದುವವರೆಗೂ ಓಸಿಆರ್ ಸಿದ್ಧವಾಗುವಂತೆ ನೋಡಿಕೊಳ್ಳಬೇಕು.
ಕಡ್ಡಾಯ ಅಂಶಗಳು ಅಪೇಕ್ಷಣೀಯ ಅಂಶಗಳು
 • ಕನ್ನಡ ತಂತ್ರಜ್ಙಾನ ಯೋಜನೆ ಅಳವಡಿಸಿರುವ ಓಪನ್ ಕಾರ್ಪಸ್ ಅನ್ನು ಎಲ್ಲರೂ ಉಪಯೋಗಿಸಬಹುದು.
ಅಪೇಕ್ಷಣೀಯ ಅಂಶಗಳು
 • ಲಾಕ್ಷಣಿಕ ಜಾಲ (ಸಿಮ್ಯಾಂಟಿಕ್ ವೆಬ್) ನ್ನು ಬಳಸಬೇಕು.
ಕಡ್ಡಾಯ ಅಂಶಗಳು
 • ಲಿಬ್ರೆ ಲಿಂಗ್ವಾ ಬಳಸಿ ಅಭಿವೃದ್ಧಿ (ಟಿಟಿಎಸ್) Libre Lingua
 • ಧ್ವನಿಯಿಂದ ಪಠ್ಯಕ್ಕೆ ನಿಖರತೆ ಕನಿಷ್ಠ ಶೇಕಡಾ 90 ಇರಬೇಕು.
ಕಡ್ಡಾಯ ಅಂಶಗಳು
 • https://www.w3.org/standards/semanticweb/
 • ಡೈರೆಕ್ಟರಿ ಆಧಾರಿತ ನಿರ್ದಿಷ್ಟ ಹುಡುಕಾಟ: ನಿಖರ ಫಲಿತಾಂಶದ ಸಾಧ್ಯತೆ ಹೆಚ್ಚಳ. (ಗುರುಪ್ರಸಾದ್ ಹೆಚ್ಚಿನ ಮಾಹಿತಿ ನೀಡುವರು)
ಕಡ್ಡಾಯ ಅಂಶಗಳು
 • ಫೋನೆಟಿಕ್ ಬ್ಲಾಕ್‌ಗಳನ್ನು ಗುರುತಿಸಬೇಕು.
 • ನಿಯಮ ಮತ್ತು ವಿನಾಯ್ತಿ ಆಧರಿಸಿ ರೂಪಿಸಬೇಕು.
 • ಮೂಲ ದತ್ತಾಂಶವನ್ನು ಸದಾಕಾಲ ಅಭಿವೃದ್ಧಿಪಡಿಸುತ್ತ ಕ್ಲೌಡ್‌ನಲ್ಲಿ (ಎಪಿಐ) ಸ್ಥಾಪಿಸಿ ಇಡಬೇಕು. ಓಪನ್ ಆಕ್ಸೆಸ್, ಓಪನ್ ಸ್ಟಾಂಡರ್ಡ್
 • ಕೋರೆಲ್ ವೆಂಚುರಾ ದಲ್ಲಿ ಇರುವ ಡಿಸ್ಕ್ರಿಶನರಿ ಹೈಫೇನೇಶನ್ ಟ್ಯಾಗ್ ಸ್ಕ್ರೈಬಸ್‌ನಲ್ಲೂ ಇದೆಯೆ ಎಂದು ಪರಿಶೀಲಿಸಬೇಕು.
ಕಡ್ಡಾಯ ಅಂಶಗಳು
ಕಡ್ಡಾಯ ಅಂಶಗಳು
 • I18N : Localisation standard
 • L10N : Localisation standard
 • Web Accessibility Initiative : ಇಲ್ಲಿ ಕನ್ನಡದ ಬಳಕೆ
 • International Standard for TTS ಮತ್ತು STT
 • FICCI : Language group
 • DAISY
 • eBooks, Audio Books
 • MT, Transliteration
 • Web Standards
 • yphenation Standards
 • HID interface
 • USB 2.0
 • GIGW ಮಾನದಂಡಗಳು
 • SHS 256 : Encryption standards as defined by GOI
ಕಡ್ಡಾಯ ಅಂಶಗಳು
 • ಜಾಲತಾಣಗಳಲ್ಲಿ ಆಕ್ಸೆಸಿಬಿಲಿಟಿ ಅಳವಡಿಕೆ
 • ದೃಷ್ಟಿವಂಚಿತರು ಬಳಸುವಂತೆ ತಂತ್ರಜ್ಞಾನ ಬಳಸಬೇಕು.
 • https://www.w3.org/standards/webdesign/accessibility
ಕಡ್ಡಾಯ ಅಂಶಗಳು
 • ಯುನಿಕೋಡ್ ಕನ್ಸಾರ್ಶಿಯಂ
 • W3c: Annual fee for government agencies. 1,905 USD
 • ICANN: ಸರ್ಕಾರದ ಕಡೆಯಿಂದ ಪ್ರತಿನಿಧಿ ಇರಬೇಕು.
 • https://gac.icann.org/join/
 • I18N : Localisation standard
 • L10N : Localisation standard
 • Web Accessibility Initiative : ಇಲ್ಲಿ ಕನ್ನಡದ ಬಳಕೆ
ಅಪೇಕ್ಷಣೀಯ ಅಂಶಗಳು
 • ಬ್ರೌಸರ್ ವಿಸ್ತರಣೆಗಳನ್ನು ರೂಪಿಸಬಹುದು.
ಕಡ್ಡಾಯ ಅಂಶಗಳು
 • ಎಲ್ಲಾ ನುಡಿ ಫಾಂಟ್‌ಗಳನ್ನೂ ಎಸ್ಐಎಲ್ ಲೈಸೆನ್ಸ್ ಅಡಿಯಲ್ಲಿ ಯುನಿಕೋಡ್‌ನಲ್ಲಿ ಪ್ರಕಟಿಸಬೇಕು. ನುಡಿಯ ಎಲ್ಲಾ ಫಾಂಟ್‌ಗಳನ್ನೂ ಯುನಿಕೋಡ್ ಪರಿವರ್ತಿಸಬೇಕು.
ಕಡ್ಡಾಯ ಅಂಶಗಳು
 • ಆನ್ನಲೈನ್‌ ಕನ್ನಡ ಫಾಂಟ್ ಪರೀಕ್ಷಾ ಮಾನದಂಡಗಳನ್ನು ಎಲ್ಲಾ ಬಗೆಯ ಯುನಿಕೋಡ್ ಸಮಸ್ಯೆಗಳನ್ನು ಹುಡುಕಿ ನಿವಾರಿಸುವ ಸಲುವಾಗಿ ರೂಪಿಸಬೇಕು.
ಕಡ್ಡಾಯ ಅಂಶಗಳು
 • ನಿಖರತೆ 95 %ಕ್ಕಿಂತ ಹೆಚ್ಚು ಇರಬೇಕು. (ಜ್ಞಾನಿ ಮಾಡಿದ್ದನ್ನು ಗಮನಿಸಬೇಕು).
ಕಡ್ಡಾಯ ಅಂಶಗಳು
 • ೧೬ ರಿಂದ ೨೪ khz ವೇವ್ ಫಾರ್ಮಾಟ್
ಕಡ್ಡಾಯ ಅಂಶಗಳು
 • WebM ಫಾರ್ಮಾಟ್ (ಮುಕ್ತ ಫಾರ್ಮಾಟ್‌)
ಕಡ್ಡಾಯ ಅಂಶಗಳು
 • ಸ್ಕ್ಯಾನ್ ಮಾಡುವಾಗ ಟಿಫ್ (TIFF) ಮತ್ತು ಜೆಪೆಗ್ (JPEG 2000) (೩೦೦ -೬೦೦ ಡಿಪಿಐ)
 • ಜಾಲತಾಣ ಪ್ರಕಟಣೆ ಮಾಡುವಾಗ ಪಿಎನ್‌ಜಿ (PNG) ಗೆ ಪರಿವರ್ತನೆ
 • ನಕಾಶೆ, ಲಾಂಚನ ಮುಂತಾದ ಸ್ವಯಂ ಸೃಷ್ಟಿಯ ಚಿತ್ರಗಳನ್ನು ಎಸ್ ವಿ ಜಿ (SVG) ಫಾರ್ಮಾಟ್‌ಗಳಲ್ಲಿ ಮಾಡಿ ಸಂರಕ್ಷಿಸಬೇಕು.
ಕಡ್ಡಾಯ ಅಂಶಗಳು
 • ಕನ್ನಡದಲ್ಲಿ ಕ್ಯು ಆರ್ ಕೋಡ್ ವ್ಯವಸ್ಥೆಯನ್ನು ರೂಪಿಸಬೇಕು. (ಈಗ ಇರುವ ಆಸ್ಕಿ ಬದಲು ಯುನಿಕೋಡ್ ಸ್ಟ್ರಿಂಗ್ ಬಳಸಬೇಕು)